ಆಪ್ತಮಿತ್ರ ಉಮೇಶ್ ಕತ್ತಿಯ ಮುಂದೆ ಕಣ್ಣಿರಿಟ್ಟ ಸಿಎಂ

ಬೆಂಗಳೂರು;( ಸುದ್ದಿವಾಣಿ): ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ನಿನ್ನೆ ತಡರಾತ್ರಿ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಹೃದಯಾಘಾತದಿಂದ ನಿಧನರಾದ ಆಹಾರ ಸಚಿವ ಉಮೇಶ್ ಕತ್ತಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ. ವೇಳೆ ಸಿಎಂ‌ ಕಣ್ಣಲಿಗಳು ತುಂಬಿದ್ದವು ಈ ಸಂದರ್ಭಲ್ಲಿ ಸಚಿವರಾದ ಅಶ್ವತ್ಥನಾರಾಯಣ,  ಗೋವಿಂದ ಕಾರಜೋಳ,  ಮುನಿರತ್ನ, ಡಾ.ಕೆ ಸುಧಾಕರ್, ಸಿಸಿ ಪಾಟೀಲ್, ಶಾಸಕರಾದ ಅರವಿಂದ್ ಬೆಲ್ಲದ, ಮಾಜಿ ಸಚಿವ ಲಕ್ಷ್ಮಣ ಸವದಿ ಉಪಸ್ಥಿತರಿದ್ದರು.  

Continue Reading

ಶಕ್ತಿ ಕೇಂದ್ರದ ಮೂಲೆ ಮೂಲೆಗಳಲ್ಲಿ ಪ್ರಜ್ವಲಿಸಿದ ಬುಡಕಟ್ಟು ಕಾಡುಗೊಲ್ಲರ ಶಕ್ತಿ

ದಿನಾಂಕ 22/12/21 ಕಾಡುಗೊಲ್ಲರ ಸುದಿನ ಕರ್ನಾಟಕದ ಕಾಡುಗೊಲ್ಲ ಹಿಂದುಳಿದ ಬುಡಕಟ್ಟು ಜನಾಂಗದ ಹೋರಾಟಗಾರರ ಜನಾಂಗದ ಚಿಂತಕರ ಮತ್ತು ಸಮುದಾಯದ ಹಿತೈಷಿಗಳ ನಿರಂತರ ಪರಿಶ್ರಮದಿಂದ ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿ ಕಾಡುಗೊಲ್ಲರ ಪರವಾಗಿ ಹತ್ತಾರು ದ್ವನಿಗಳು ರಾಜ್ಯದ ಶಕ್ತಿ ಕೇಂದ್ರದ ಮೂಲೆಮೂಲೆಗಳಲ್ಲಿ ಪ್ರಜ್ವಲಿಸಿ ಮಾರ್ದನಿಸಿತು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾದ್ಯಕ್ಷರಾದ ಶಿವುಯಾದವ್ ಹರ್ಷ ವ್ಯಕ್ತಪಡಿಸಿದ್ದಾರೆ.   ಕಾಡುಗೊಲ್ಲ ಬುಡಕಟ್ಟು ಜನಾಂಗದ ಇತಿಹಾಸವನ್ನು ಸಂಶೋಧನಾ ನೆಲೆಯಲ್ಲಿ ತರ್ಕಬದ್ಧವಾಗಿ ಮಾನ್ಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಂಕಿಅಂಶಗಳನ್ನು […]

Continue Reading

ಜಾನಪದ ತಜ್ಞರಾದ ಪ್ರೊ. ಜ್ಯೋತಿ ಹೊಸೂರ ನಿಧನ

ಬೆಳಗಾವಿ:(ಸುದ್ದಿವಾಣಿ) ಕನ್ನಡದ ಹಿರಿಯ ವಿದ್ವಾಂಸರು ಹಾಗೂ ಜಾನಪದ ತಜ್ಞರಾದ ಪ್ರೊ. ಜ್ಯೋತಿ ಹೊಸೂರ ಅವರು ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದ ಇವರು ಕನ್ನಡ ಸಾಹಿತ್ಯ, ಸಮಾಜ, ಸಂಸ್ಕೃತಿ, ಹಾಲುಮತ ಸಮುದಾಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸಂಶೋಧನೆ ಕೈಕೊಂಡು ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ಜೊತೆಗೆ ಕಾಲಗತಿ ಪ್ರಕಾಶನದ ಮೂಲಕ ಸಂಸ್ಕೃತಿ ಚಿಂತಕರಾದ ಡಾ.ಶಂಬಾ ಜೋಶಿ ಅವರಂಥ ಅನೇಕ ಸಂಶೋಧಕರ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಶಂಬಾ ಅವರ ಆತ್ಮೀಯ […]

Continue Reading

ಮರಾಠಿ ಮತ್ತು ಕುರುಬ ಸಮಾಜದವರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು; ಕನಕಶ್ರೀ

  http://www.suddivaani.com ಬೆಳಗಾವಿ: ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರವಾಗಿ ಸ್ಥಳೀಯವಾಗಿ ಎರಡು ಸಮುದಾಯಗಳ ಮದ್ಯೆ ಒಂದಿಷ್ಟು ಮನಸ್ತಾಪವಿತ್ತು.ಇದೀಗ ಅಂತಹ ವಿವಾದಕ್ಕೆ ಸಂಪೂರ್ಣ ತೆರೆ ಬಿದ್ದಿದೆ. ಸಂಗೊಳ್ಳಿ ಮತ್ತು ಪೀರನವಾಡಿ ಬಂಧುಗಳು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಜಗದ್ಗುರುಗಳನ್ನು ಬೇಟಿ ಮಾಡಿ ಗ್ರಾಮಕ್ಕೆ ಆಗಮಿಸಬೇಕೆಂಬ ಆಹ್ವಾನ ಮಾಡಿದ್ದರು. ಭಾನುವಾರ ರಾಯಣ್ಣನ ಜನ್ಮಸ್ಥಳವಾದ ಸಂಗೊಳ್ಳಿ ಮತ್ತು ಐಕ್ಯಸ್ಥಳವಾದ ನಂದಗಡಕ್ಕೆ ಬೇಟಿ ನೀಡಿ ರಾಯಣ್ಣನ ಅಧಿಷ್ಠಾನ ಕ್ಕೆ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು. ಕೊನೆಗೆ ಪೀರನವಾಡಿ […]

Continue Reading

ಪೀರನವಾಡಿದಲ್ಲಿ ಶೀಘ್ರವೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ : ಸಚಿವ ರಮೇಶ್ ಜಾರಕಿಹೊಳಿ‌

ಬೆಳಗಾವಿ: ಸಾರ್ವಜನಿಕ ಗಣೇಶ ಉತ್ಸವದ ವಿನಾಯಕ ಮೂರ್ತಿಗಳ ವಿಸರ್ಜನೆಯ ಬಳಿಕ ಮಹತ್ವದ ಸಭೆ ನಡೆಸಿ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಹೇಳಿದರು. ಸಚಿವರ ಗೃಹ ಕಚೇರಿಯಲ್ಲಿ ನಡೆದ ಕುರುಬರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ನಮ್ಮ ಸರ್ಕಾರದ ಮೇಲೆ ಭರವಸೆ ಇಡಿ, ಕೊಟ್ಟ ‌ಮಾತಿನಂತೆ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಆಂಗ್ಲರ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ […]

Continue Reading

ತೆರವುಗೊಳಿಸಿದ ಸ್ಥಳದಲ್ಲೇ ಸಂಗೊಳ್ಳಿ ರಾಯಣ್ಣನ ಪ್ರತಿಮೆ

  ಕನ್ನಡಪರ ಸಂಘಟನೆಗಳು, ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು, ದಲಿತ, ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ರಾಜ್ಯ ಹಾಲುಮತ ಮಹಾಸಭಾ ಪಟ್ಟು ಬೆಳಗಾವಿ ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಆಗಸ್ಟ್ 15ರಂದು ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದನ್ನು ಖಂಡಿಸಿ, ರಾಜ್ಯಾದ್ಯಂತ, ಕನ್ನಡಪರ ಸಂಘಟನೆಗಳು, ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳು ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು ಪ್ರತಿಭಟನೆಗಳು ನಡೆಸುತ್ತಿದ್ದಾರೆ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತವು ಪೀರನವಾಡಿಯಲ್ಲಿ ಗ್ರಾಮಸ್ಥರ ಜೊತೆ ಸಭೆ ನಡೆಸಿ, ಪೀರನವಾಡಿ […]

Continue Reading

ಕುರಿಗಾರರು ಮತ್ತು ಕಂಬಳಿ ನೇಕಾರ ಕಡೆಗಣನೆ ಸರಿಯಲ್ಲ. ವಿಶೇಷ ಪ್ಯಾಕೇಜ್ ಘೋಷಣೆಗೆ ಹಾಲುಮತ ಮಹಾಸಭಾ ಆಗ್ರಹ

ಬೆಳಗಾವಿ: ಸಂಕಷ್ಟದಲ್ಲಿರುವ ಕುರಿಗಾಹಿಗಳಿಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಂಪೂರ್ಣ ಸಾಲ ಮನ್ನಾ ಮಾಡಿ ಮತ್ತು ಕಂಬಳಿ ನೇಕಾರರಿಗೆ, ಪ್ಯಾಕೇಜ್ ಘೋಷಿಸಿ ಎಂದು “ಶ್ರೇಷ್ಠ ಪಶುಪಾಲಕ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಹಾಗೂ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕರಾದ ಮಾರುತಿ ಮರಡಿ ಮೌರ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಅವರು ಬಟ್ಟೆ, ರೇಷ್ಮೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಲಕ್ಷಾಂತರ ಕುರಿಗಾಹಿಗಳು ಮತ್ತು ಕಂಬಳಿ ನೇಕಾರರು […]

Continue Reading

ಕೊರೋನಾ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧ್ಯಂತ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಸಚಿವರಾದ ಶಶಿಕಲಾ ಜೊಲ್ಲೆ ರೌಂಡ್ಸ್

ಬೆಳಗಾವಿ: ಲೋಕಸಭಾ ಸದಸ್ಯರಾದ ಅಣ್ಣಾ ಸಾಹೇಬ ಜೊಲ್ಲೆ ಅವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ರೌಂಡ್ಸ್ ಮಾಡುತ್ತಿದ್ದಾರೆ. ಖುದ್ದು ಪಂಚಾಯಿತಿಗಳಿಗೆ ಬೇಟಿ ನೀಡುತ್ತಿದ್ದು ಜನ ಜಾಗೃತಿ ಮೂಡಿಸುವ ಜತೆಗೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತಿದ್ದು ಮುನ್ನೆಚ್ಚರಿಕೆ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಶನಿವಾರ ಬೇಡಕಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಕೊರೊನಾ ವೈರಸ್ ನಿಂದಾಗಿ ಗ್ರಾ.ಪಂ ನಿಂದ ತೆಗೆದುಕೊಳ್ಳಲಾದ ಸ್ವಚ್ಛತೆ, ಮಾಸ್ಕ್ ವಿತರಣೆ, ನೈರ್ಮಲ್ಯ, ಫಾಗಿಂಗ್ […]

Continue Reading

ಜಿಲ್ಲಾಧಿಕಾರಿ ಮನೆಯ ಮುಂದೆ ಶೂಟ್ ಮಾಡಿಕೊಂಡು ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆ

ಬೆಳಗಾವಿ:ನಗರದ ಜಾಧವನಗರ ಬಳಿ ಇರುವ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಕಾವಲಿಗಿದ್ದ ಪೊಲೀಸ್ ಪೇದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕಾಶ ಗುರಯ್ಯನವರ್ (35) ಆತ್ಮಹತ್ಯೆ ಮಾಡಿಕೊಂಡ ಪೇದೆ. ತಲೆಗೆ 2 ಸುತ್ತು ಗುಂಡು ಹಾರಿಸಿಕೊಂಡಿದ್ದು ಇಡೀ ಸ್ಥಳ ರಕ್ತಸಿಕ್ತವಾಗಿದೆ. ಪ್ರಕಾಶ್ ತಾಯಿ, ಪತ್ನಿ, ಮಕ್ಕಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕಾಶ ಗುರುವಣ್ಣನವರ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯವರು. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆಂದು ನಿರ್ಮಿಸಿರುವ ಜಾಗದಲ್ಲಿ ಕುತ್ತಿಗೆಗೆ ಶೂಟ್ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. […]

Continue Reading

ಕೊರೋನಾಗೆ ಬೆಚ್ಚಿಬಿದ್ದ ರಾಮನಗರ: ಪಾದರಾಯನಪುರ ಗಲಭೆ ಆರೋಪಿತರ ಪೈಕಿ ಇಬ್ಬರಲ್ಲಿ ಸೋಂಕು ದೃಢ..! ಡಿ.ಕೆ.ಶಿ. ಹೆಚ್.ಡಿ.ಕೆ ಗರಂ

ಸುದ್ದಿವಾಣಿ ವಿಶೇಷ ವರದಿ. ಬೆಂಗಳೂರು/ರಾಮನಗರ:ನಿಜಕ್ಕೂ ರಾಮನಗರ ಚೆಂದವಾಗಿತ್ತು. ಅಲ್ಲಿನ ಕಾರಾಗೃಹಕ್ಕೆ ಅದ್ಯಾವಾಗ ಪಾದರಾಯನಪುರ ಪುಂಟರು ಎಂಟ್ರಿ ಕೊಟ್ರೋ ಅಲ್ಲಿಗೆ ಶಾಂತಿಭಂಗವಾಯ್ತು. ಸುದ್ದಿಮಾಡಲು ಬಂದಿದ್ದ ಪಬ್ಲಿಕ್ ಟಿವಿಯ ಹನುಮಂತು ಅಪಘಾತದಲ್ಲಿ ಅಲ್ಲಿಯೇ ದುರ್ಮರಣಕ್ಕಿಡಾದರು. ರಾಜ್ಯದಲ್ಲಿ 445 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿ, 17 ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು ಇದೀಗ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳಲ್ಲಿ ಸೋಂಕು ಕಂಡುಬಂದಿರುವುದರಿಂದ ರಾಮನಗರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಈಗ ಸರಕಾರ […]

Continue Reading