ಸ್ವರಾಜ್ಯಕ್ಕೆ ಮುಕ್ಕಾಲುನೂರು…ನಿಜವಾದ ಭಾರತೀಯರಾಗಿ ಒಂದಾಗುವ ದಿನ

Bangalore Nation Special story

ಸ್ವರಾಜ್ಯಕ್ಕೆ ಮುಕ್ಕಾಲುನೂರು..

ಹೌದು ಇಂದು ತಾಯಿ ಭಾರತೀಯ ಮಕ್ಕಳಾದ ನಮಗೆ 75ರ ಆಚರಣೆಯ ಸಮಯವಿದಾಗಿದೆ. “ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು, ನಾನು ಅದನ್ನು ಪಡೆದೆ ತೀರುತ್ತೇನೆ” ಎಂಬ ಹೇಳಿಕೆಯಂತೆ ನಾವು ಸ್ವಾತಂತ್ರ್ಯವಾಗಿ ಜೀವಿಸುತ್ತಿದ್ದೇವೆ. ಈ ದಿನಕ್ಕಾಗಿ ಅದೆಷ್ಟೋ ಸಂಘರ್ಷಗಳೇ ನಡೆದು ವೀರರ ತ್ಯಾಗ ಬಲಿದಾನಗಳಾಗಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ಈ 75ನೇ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಎಲ್ಲರ ಮನದಾಳದಲ್ಲಿ ಎಲ್ಲಿಲ್ಲದ ಹರುಷವನ್ನು ತಂದಿರುವುದು ನಿಜವೇ. ಈ ಸ್ವಾತಂತ್ರ್ಯೋತ್ಸವ ನಿಜಕ್ಕೂ ಒಂದು ಬಗೆಯ ಹೆಮ್ಮೆ ತರುವಂತದ್ದು. ಏಕೆಂದರೆ ನಮ್ಮ ತಾಯಿ ಭಾರತಾಂಬೆಯನ್ನು “ವಿಶ್ವಗುರು”ವನ್ನು ಮಾಡುವ ಕನಸು ಹೊತ್ತಿದ್ದ “ಸ್ವಾಮಿ ವಿವೇಕಾನಂದರ 150ನೇ ಜಯಂತಿ”, “ಗುರು ತೇಗ್ ಬಹದ್ದೂರರ 400ನೇ ಜಯಂತಿ”, “ತಾತ್ಯಾ ಟೋಪೆಯ 200ನೇ ಜಯಂತಿ”, “ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು” ಈ ಘೋಷಣೆಯ 150ನೇ ವರ್ಷ, “ಸುಭಾಶರ 125ನೇ ಜಯಂತಿ” ಹೀಗೆ ಹತ್ತು ಹಲವು ಸಂಗತಿಗಳ ಸ್ಮರಣೆಗಳ ನಡುವೆ ಕಿರೀಟ ಪ್ರಾಯವಾದದ್ದು ಈ ಬಾರಿಯ ಸ್ವಾತಂತ್ರ್ಯದ ಹಬ್ಬ.

ನಮಗೆಲ್ಲ ಸಹಜವಾಗಿ ತಿಳಿದಂತೆ ಸ್ವಾತಂತ್ರ್ಯದ ಸಂಘರ್ಷ ಶುರುವದ ಹಾದಿಯನ್ನು ನಾವು ನೋಡುವುದಾದರೆ 1854ರ ದಂಗೆಯ ನಂತರ, ಈಸ್ಟ್ ಇಂಡಿಯಾ ಕಂಪನಿಯು 1858 ರಲ್ಲಿ ರಾಣಿ ವಿಕ್ಟೋರಿಯಾ ಗೆ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿತು, ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಸ್ಥಾಪಿಸಿತು. 1857ರ ದಂಗೆಯು ಭಾರತದ ನೆಲದ ಮೇಲೆ ವಿದೇಶಿ ಅಧಿಕಾರದ ವಿರುದ್ಧದ ಮೊದಲ ಕಿಡಿಯಾಗಿದೆ. ಇದರ ಫಲವಾಗಿ ದೇಶದ ಸ್ವಾತಂತ್ರ್ಯವನ್ನು ಸಾಧಿಸಲು ದೇಶದ ವಿಮೋಚನಾ ಹೋರಾಟಗಾರರು ಅನೇಕ ಚಳುವಳಿಗಳನ್ನು ನಡೆಸಿದರು.
ಇದಕ್ಕಾಗಿ ಅದೆಷ್ಟೋ ವೀರರು ಊಟ, ವಸತಿ, ಮನೆ, ಸಂಸಾರಗಳನ್ನು ತೊರೆದು ತಮ್ಮ ಪ್ರಾಣವನ್ನು ಲೆಕ್ಕಿಸದೆ ತಾಯಿ ಭಾರತೀಯ ಮಡಲಿಗೆ ಅರ್ಪಿಸಿ ಅಜರಾಮರವಾಗಿದ್ದಾರೆ.
ಇದರಂತೆಯೇ ನಮ್ಮ ವೀರರ ಹೋರಾಟಗಳಿಂದ ಪ್ರಥಮ 1947 ರ ಆಗಸ್ಟ್ 14 ರ ಮಧ್ಯೆ ರಾತ್ರಿ ನಮಗೆ ಸ್ವಾತಂತ್ರ್ಯ ದೊರೆತಿರುವುದು ಎಲ್ಲರಿಗೂ ತಿಳಿದಿದೆ.
ಇದರಲ್ಲಿ ನಮಗೆ ತಿಳಿದಿರುವ ಹಾಗೆ 6 ಲಕ್ಷಕ್ಕೂ ಹೆಚ್ಚು ಭಾರತ ಮಾತೆಯ ಸುಪುತ್ರರು ತ್ಯಾಗ ಬಲಿದಾನಗಳನ್ನು ಗೈದಂತಹ ಕ್ರಾಂತಿಕಾರಿ ವೀರರನ್ನು ನಾವಿಂದು ನೆನೆಯಬಹುದಾಗಿದೆ.

ಇನ್ನು “ಸಿಡಿಲಸಂತರಾದ ಸ್ವಾಮಿ ವಿವೇಕಾನಂದರು” ನಮ್ಮ ತಾಯಿ ಭಾರತಿಯನ್ನು ಕುರಿತು ಕಂಡಂತಹ “ವಿಶ್ವಗುರು ಭಾರತದ” ಕನಸು ನನಸಾಗುತ್ತಿದೆ ಎಂಬ ಸಂತೋಷವೂ ಮನದಲ್ಲಿದೆ.
ಏಕೆಂದರೆ, ಕೊರೋನ ವಿಷಯವನ್ನೇ ನಾವು ನೋಡುವುದಾದರೆ “130 ಕೋಟಿ ಜನಸಂಖ್ಯೆಯ ಭಾರತ ಕೋರೋನವನ್ನು ಹೇಗೆ ನಿಭಾಯಿಸುತ್ತದೆ” ಎಂದು ಇಡೀ ಜಗತ್ತು ನಮ್ಮನ್ನು ನೋಡುತ್ತಿತ್ತು. ಆದರೆ ಈ ವಿಷಯದಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರಗಳು ಸಹ ಭಾರತದ ಮುಂದೆ ತಲೆಬಾಗಿ ಶರಣಾದವು. ಕಾರಣ ಭಾರತದ ವಿಜ್ಞಾನಿಗಳು ಅದಕ್ಕೆ ಉತ್ತರ ನೀಡಿದರು. ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿರುವ ಹಾಗೂ ಕಾಯಿಲೆಯನ್ನು ಹುಟ್ಟುಹಾಕಿದ ಚೀನಾ ಅದಕ್ಕೆ ಅದರ ಮದ್ದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ವಿಶ್ವದ ದೊಡ್ಡಣ್ಣ ಅಮೇರಿಕಾ ಕೂಡ ಕೊರೋನಾಗೆ ಶರಣಾಯಿತು. ಕಾರಣ ಅತಿ ಭಯಾನಕ ಸಾಂಕ್ರಾಮಿಕ ರೋಗಕ್ಕೆ ಭಾರತದ ವಿಜ್ಞಾನಿಗಳು ಔಷಧಿಯನ್ನು ಕಂಡುಹಿಡಿದರು. ನಾವು ನೋಡಬಹುದು ನಮ್ಮ ಜಗತ್ತಿನಲ್ಲಿ ಪೋಲಿಯೋ ಕಾಯಿಲೆ 1950 ರಲ್ಲಿ ಬಂದಾಗ, ಅದರಿಂದ ಆದಂತಹ ಅನಾಹುತಗಳು ತುಂಬಾ ದುಷ್ಪರಿಣಾಮಗಳನ್ನು ಉಂಟು ಮಾಡಿತು. ಅದಕ್ಕೆ ಔಷಧಿಯನ್ನು ಕಂಡುಹಿಡಿಯಲು 11 ವರ್ಷಗಳನ್ನು ತೆಗೆದುಕೊಂಡು ಕೊನೆಯಲ್ಲಿ ‘ಆಲ್ಬರ್ಟ್ ಸಾಬಿನ್’ ಎಂಬ ವಿಜ್ಞಾನಿ 1961ರಲ್ಲಿ ಕಂಡು ಹಿಡಿದರು. ಹೀಗಿರುವಾಗ ಭಾರತ ವರ್ಷ ತುಂಬುವುದರೊಳಗಾಗಿ ಕೊರೋನ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯಿತು. ಅಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ಸರಿ ಸುಮಾರು 58 ಮಿಲಿಯನ್ ಡೋಸ್ ಗಳಷ್ಟು ಔಷಧಿ ಪೂರೈಕೆಯನ್ನು ಮಾಡಿ ಲಕ್ಷಾಂತರ ಜನರ ಪ್ರಾಣವನ್ನು ರಕ್ಷಿಸಿತು..


ಇನ್ನು ನಮಗೆ ಈಗಷ್ಟೇ ಶ್ರೀಲಂಕದಲ್ಲಿ ಸೃಷ್ಟಿಯಾದಂತಹ ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟಿನ ಬಗ್ಗೆಯೂ ನಮಗೆ ತಿಳಿದಿದೆ. ಅಲ್ಲಿನ ಜನರಿಗೆ ತಿನ್ನಲು ಸರಿಯಾಗಿ ಆಹಾರ ಸಹ ಸಿಗದೆ ಇರುವಂತಹ ಬಿಕ್ಕಟ್ಟಿನ ಪರಿಸ್ಥಿತಿ ಶುರುವಾಯಿತು. ಆದರೆ ನಮ್ಮ ಭಾರತ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಅದಕ್ಕೆ ಆಹಾರವನ್ನು ಕಳುಹಿಸಿಕೊಟ್ಟಿತು ಹಾಗೂ ಸಹಾಯ ಹಸ್ತವನ್ನು ನೀಡಿತು.
1974ರಲ್ಲಿ ಅಮೆರಿಕ ಭಾರತಕ್ಕೆ ನಿರ್ಬಂಧ ವಿಧಿಸಿತ್ತು. 1998ರಲ್ಲಿ ಮತ್ತೊಮ್ಮೆ ಭಾರತ ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿ ಕಣ್ಣು ಕೆಂಪಾಗಿಸಿತ್ತು. ‘ಆದರೆ ಈ ಬಾರಿ ಬೆದರಿಕೆಗೆ ಬಗ್ಗದ ಸ್ವಾಭಿಮಾನಿ ಭಾರತ, ಅಮೆರಿಕದ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಜಗತ್ತಿಗೆ ತನ್ನ ತಾಕತ್ತನ್ನು ಪ್ರದರ್ಶಿಸಿತು’. ವಿಶ್ವದ ಬಲಿಷ್ಠ ರಾಷ್ಟ್ರಗಳು ಭಾರತವನ್ನು ಕೆಣಕಲು ಒಮ್ಮೆ ನೋಡಿಕೊಳ್ಳುವ ಪರಿಸ್ಥಿತಿ ಶುರುವಾಗಿ ಹೋಗಿದೆ.
ಅಷ್ಟೇ ಅಲ್ಲ ನಮ್ಮ ಭಾರತ ಶೇರು ಮಾರುಕಟ್ಟೆಯಲ್ಲಿಯೂ ಸಹ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ರತಿ ಅರ್ಥ ಸೆಕೆಂಡಿಗೆ 91 ಕೋಟಿಯಷ್ಟು ಅಭಿವೃದ್ಧಿಯನ್ನು ಹೊಂದಿತ್ತಿದ್ದೇವೆ. ಹೀಗೆ ಮುಂದುವರೆದರೆ 2027ರ ವೇಳೆಗೆಲ್ಲ ಭಾರತವೇ ಎಲ್ಲಾದರಲ್ಲೂ ಮೇಲುಗೈ ಸಾಧಿಸುವುದಾಗಿ ಸೂಚನೆಯನ್ನು ಸಹ ನೀಡಿದ್ದಾರೆ.
ಕೇವಲ ಇಷ್ಟೇ ಅಲ್ಲ ನಾವು ನೋಡಿರಬಹುದು, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಕೊನೆಯ ಸಂದಾನದ ಸಮಯದಲ್ಲಿ ನಮ್ಮ ಹೆಮ್ಮೆಯ ಭಾರತವನ್ನು ಸಂದಾನ ಮಾಡಿಸಿಕೊಡಲು ಬಳಿ ಬಂದು ಅಂಗಲಾಚಿತನ್ನು ನಾವು ನೋಡಿರಬಹುದಾಗಿದೆ.
ಇನ್ನು ನಮ್ಮ ಸೈನ್ಯದ ವಿಚಾರವಾದರೆ 2019 ರಲ್ಲಿ ನಡೆದಂತಹ ಪುಲ್ವಾಮ ದಾಳಿಯಲ್ಲಿ ನಮ್ಮ ವೀರ ಯೋಧರು 40 ಜನರು ಹುತಾತ್ಮರಾಗುತ್ತಾರೆ. ಆದರೆ ಅದರ ಪ್ರತಿಕಾರವಾಗಿ ಭಾರತವು ಪಾಪಿ ಪಾಕಿಸ್ತಾನದ ಬಾಲಕೋಟ್ ಎಂಬ ಪ್ರದೇಶಕ್ಕೆ ನುಗ್ಗಿ “ಏರ್ ಸ್ಟ್ರೈಕ್” ಅನ್ನು ಮಾಡಿ ಉಗ್ರರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ, ಧ್ವಂಸ ಮಾಡಿ ಅಲ್ಲಿದ್ದವರೆಲ್ಲರನ್ನು ಸದೆಬಡೆದು ಬರುತ್ತಾರೆ. ಶತ್ರು ದೇಶಕ್ಕೆ ನುಗ್ಗಿ ಹೊಡೆಯುವ ಶಕ್ತಿ ಇರುವ ಭಾರತವನ್ನು ಕೆಣಕಲು ತಮ್ಮ ಶಕ್ತಿ ಸಾಮರ್ಥ್ಯವನ್ನು ಮೊದಲು ನೋಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಇನ್ನು ಈಗಂತೂ ನಮ್ಮ ಸೈನ್ಯಕ್ಕೆ ಮುಕ್ತ ಸ್ವಾತಂತ್ರ್ಯ ದೊರೆತಿದೆ. ಜಗತ್ತಿನಲ್ಲೇ ಬಲಿಷ್ಠ ರಕ್ಷಣಾ ಪಡೆಗಳ ಸಾಲಿನಲ್ಲಿ ‘ನಮ್ಮ ಭಾರತವು ನಾಲ್ಕನೇ ಸ್ಥಾನ’’ವನ್ನು ಗಳಿಸಿದೆ.
ಇನ್ನು ಈ ಮೇಲಿನ ಎಲ್ಲಾ ಅಂಶಗಳನ್ನು ಒಮ್ಮೆ ಗಮನಿಸಿದಾಗ ನಾವು ಪಠ್ಯಪುಸ್ತಕಗಳಲ್ಲಿ ಓದಿಕೊಂಡು ಬಂದಿರುವ ಹಾಗೆ “ನಿಜಕ್ಕೂ ನಮ್ಮ ಭಾರತ ಮುಂದುವರೆಯುತ್ತಿರುವ ರಾಷ್ಟ್ರವೇ?” ಎಂಬ ಸಂಶಯ ಕಾಡುತ್ತದೆ..

ಇನ್ನು ನಮ್ಮ ಸರ್ಕಾರಗಳು ಅಷ್ಟೇ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವೈಭವಿಯೂತವಾಗಿ ಆಚರಿಸುತ್ತಿರುವುದು ನಮಗೆಲ್ಲ ತಿಳಿದಿದೆ…
ಕೇಂದ್ರ ಸರ್ಕಾರವು ಕೂಡ ನಾನಾ ಹೆಸರುಗಳಿಂದ ಅಂದರೆ, “ಅಜಾದಿ ಕಾ ಅಮೃತ ಮಹೋತ್ಸವ” ಅಂದರೆ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಎಂಬ ಶೀರ್ಷಿಕೆ ಅಡಿಯಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಹಾಗೆಯೇ ನಮ್ಮ ಪ್ರಧಾನ ಮಂತ್ರಿಗಳಾದಂತಹ ಶ್ರೀ ನರೇಂದ್ರ ಮೋದಿಜೀ ಅವರ “ಹರ್ ಘರ್ ಮೆ ತಿರಂಗಾ” ಎಂಬ ಹೆಸರಿನಲ್ಲಿ ಪ್ರತಿ ಮನೆ ಮನೆಗಳ ಮೇಲೆ ಮೂರು ದಿನಗಳ ಕಾಲ ತ್ರಿವರ್ಣ ಧ್ವಜವನ್ನು ಹಾರಿಸಿ ತಾಯಿ ಭಾರತಾಂಬೆಯನ್ನು ಉನ್ನತೊನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ…
ಇನ್ನು ನಮ್ಮ ಕರ್ನಾಟಕವು ಅಷ್ಟೇ ಇಲ್ಲಿ ಎಲ್ಲವೂ ಇದೆ. ನಮ್ಮ ಇತಿಹಾಸ ಪರಂಪರೆಗಳು, ಸಾಂಸ್ಕೃತಿಕ ಧರೋಹರವೇ ಆಗಲಿ ಇತರೆ ಯಾವ ರಾಜ್ಯಕ್ಕೂ ಕಮ್ಮಿ ಇಲ್ಲ. ಕಾವೇರಿಯಿಂದ ಗೋದಾವರಿಯ ವರೆಗೆ ಹಬ್ಬಿದ, ಗಂಗೋತ್ರಿಯಲ್ಲಿ ಸೈನ್ಯದ ಆನೆಗಳು ಮೀಯುತ್ತಿದ್ದ ಗಂಡುಗಲಿಗಳ ಸಾಮ್ರಾಜ್ಯವಿದು….!
ಸ್ವಾಭಿಮಾನದ ಪ್ರತಿಕವಾಗಿ, ಸಮನ್ವಯದ ಪ್ರತಿಪಾದಕರವಾಗಿ ರಾಷ್ಟ್ರದ ಹಿತ ದೃಷ್ಟಿಯಿಂದ ಜೊತೆ ಜೊತೆಗೆ ಸಾಗಿದವರು. ಹೀಗಾಗಿಯೇ “ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಎನ್ನುವ ಎದೆಗಾರಿಕೆ ನಮ್ಮದು. ಭಾರತ ಮಾತೆಯ ಮಗಳಾದ ಕನ್ನಡ ತಾಯಿಯನ್ನು ಆರಾಧಿಸುವ ಭಾಗ್ಯ ನಮ್ಮದು..
ಹಾಗಾಗಿಯೇ ನಮ್ಮ ಕರ್ನಾಟಕ ಸರ್ಕಾರವು ಕೂಡ “ಸ್ವಾತಂತ್ರ್ಯ ಭಾರತಿಗೆ ಕನ್ನಡದ ಆರತಿ” ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ 75ನೇ ಸ್ವಾತಂತ್ರ್ಯೋತ್ಸವಕ್ಕೆ ಕರ್ನಾಟಕದ 75 ಸ್ವಾತಂತ್ರ್ಯ ಹೋರಾಟ ನಡೆದಂತಹ ಜಾಗಗಳ ಕುರಿತು 75 ಪುಸ್ತಕವನ್ನು ಮಾಡಿ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಇದರಿಂದ ನಮ್ಮ ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತವರನ್ನು ಮೂಲೆ ಮೂಲೆಗಳಿಂದ ಎಳೆದಂದು ನಮಗೆ ತಿಳಿಯದಂತವರನ್ನು ಸಹ ನಮ್ಮ ಮುಂದೆ ಬೆಳಕಿಗೆ ತಂದಿದ್ದಾರೆ.
ಇನ್ನು ಇಷ್ಟೇ ಅಲ್ಲ ದೇಶದ ಮೂಲೆ ಮೂಲೆಗಳಲ್ಲಿ ಈ ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಬೈಕ್ ಜಾಥಾಗಳನ್ನು, ಸೈಕಲ್ ಜಾಥಾಗಳನ್ನು ಹಾಗೂ ತಿರಂಗವನ್ನು ಹಿಡಿದು ತಿರಂಗ ಜಾಥಾಗಳನ್ನು ನಡೆಸಿ ಎಲ್ಲರಿಗೂ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಇನ್ನು ನಮ್ಮ ಯುವ ಪೀಳಿಗೆಯ ಕೂಡ ತಾಯಿ ಭಾರತಾಂಬೆಯ ಅಭಿವೃದ್ಧಿಗೆ ಸಹಕರಿಸಿದರೆ ನಮ್ಮ ಭಾರತವನ್ನು ನಾವು ಆದಷ್ಟು ಬೇಗ “ವಿಶ್ವಗುರು” ಸ್ಥಾನಕ್ಕೆ ಕೋರಿಸಬಹುದು.
ಏಕೆಂದರೆ, ನಮ್ಮ ದೇಶದ ಪ್ರತಿ ಯುವಕ ಯುವತಿಯರು ಒಂದು ಹೆಜ್ಜೆ ಮುಂದಿಟ್ಟರೆ ನಮ್ಮ ದೇಶದ ಅಭಿವೃದ್ಧಿ ಯಾದಂತೆಯೇ.
ಆದರೆ ನಾವುಗಳು ಹೇಗಿದ್ದೇವೆ ಎಂದರೆ ಕೇವಲ ಸ್ವಾತಂತ್ರ್ಯದ ದಿನದಂದು ಮಾತ್ರ ಮೊಬೈಲ್ಗಳಲ್ಲಿ ಸಂದೇಶಗಳನ್ನು ಕಳುಹಿಸುವುದೇ ಒಂದು ದೊಡ್ಡ ರಾಷ್ಟ್ರಸೇವೆಯಾಗಿ ಹೋಗಿದೆ.
ನನಗೆ ತಿಳಿದಿರಬಹುದು ಈ ಸಮಾಜಕಾರ್ಯಕ್ಕಾಗಿ ಅದೆಷ್ಟೋ ನಿಷ್ಕಲ್ಮಶ ಸಂಘಟನೆಗಳು ಯಾವುದೇ ಲಾಭಗಳನ್ನುಗಳಿಸದೇ ಕಾರ್ಯವನ್ನು ನಿರ್ವಹಿಸಿಸುತ್ತಿವೇ. ಅದರಲ್ಲಿ ನಮ್ಮ ಬಿಡುವಿನ ಸಮಯದಲ್ಲಾದರೂ ನಮ್ಮ ಕೈಯಲ್ಲಿ ಸಾಧ್ಯವಾದ ಮಟ್ಟಿಗೆ ರಾಷ್ಟ್ರಸವೆಯನ್ನು ಮಾಡೋಣ..
ಒಂದು ಸಣ್ಣ ಉದಾಹರಣೆಯನ್ನೇ ಗಮನಿಸುವುದಾದರೆ, ನಮ್ಮ ಸಮಾಜದ ದೃಷ್ಟಿಯಲ್ಲಿ ಪ್ರತಿ ವರ್ಷ ಫೆಬ್ರವರಿ 14 ನ್ನು ಅದರಲ್ಲಿಯೂ ನಮ್ಮ ಯುವ ಪೀಳಿಗೆ “ಪ್ರೇಮಿಗಳ ದಿನ” ಎಂದು ಆಚರಣೆ ಮಾಡಿದರೆ ಒಂದು ಸಂಘಟನೆ ಆ ದಿನವನ್ನು “ದೇಶ ಪ್ರೇಮಿಗಳ ದಿನ” ಎಂದು ಆಚರಣೆ ಮಾಡುತ್ತದೆ ಎಂದರೆ ನಾವು ನಿಜಕ್ಕೂ ಆ ಸಂಘಟನೆಗೆ ಒಂದು ಸಲಾಂ ಎನ್ನಬೇಕೆನ್ನಿಸುತ್ತದೆ. ನಾಡಿನ ಯುವ ತರುಣರಲ್ಲಿ ದೇಶಭಕ್ತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ.
ಇನ್ನು ನಾವು ಯುವಕರು ಸ್ವಾತಂತ್ರ ಹೋರಾಟದ ಕುರಿತು ಇರುವ ಪುಸ್ತಕಗಳನ್ನು ಓದಿ, ಬೇರೆಯವರಿಗೂ ಅದನ್ನು ಅರ್ಥ ಮಾಡಿಸುವ ಕೆಲಸವನ್ನು ಸಹ ಮಾಡಬಹುದಾಗಿದೆ.
ಇನ್ನು ಎಲ್ಲೆಲ್ಲಿ ಸ್ವಾತಂತ್ರ್ಯ ಹೋರಾಟಗಳು ನಡೆದಿವೆ ನಾವು ಒಮ್ಮೆ ಭೇಟಿಯನ್ನು ಕೊಡುವ ಒಂದು ಸಣ್ಣ ಪ್ರಯತ್ನವನ್ನು ಸಹ ಮಾಡಬಹುದು ಮತ್ತು ಅದನ್ನು ಬೇರೆಯವರಿಗೂ ತಿಳಿಸಬಹುದು.
ಸ್ವಾತಂತ್ರ ಹೋರಾಟಗಾರರು ತಾಯಿ ಭಾರತಾಂಬೆಯ ಮಡಿಲಿಗೆ ಶರಣಾದರೆ, ಇಂದು ನಮ್ಮ ಹೆಮ್ಮೆಯ ವೀರ ಯೋಧರು ನಮ್ಮ ತಾಯ ಸೆರಗಿಗೆ ಕೈಯಿಟ್ಟವರನ್ನು ಕೊಂದು ಹುತಾತ್ಮರಾಗುತಿದ್ದರೆ. ಸಮಯ ಬಂದರೆ ತಾಯಿ ಭಾರತೀಗೆ ಕ್ರಾಂತಿಕಾರಿಗಳ ಅವಶ್ಯಕತೆ ಬಂದರೆ ನಾವು ಕ್ರಾಂತಿಕಾರಿಗಳು ಆಗಲು ಸಿದ್ದರಾಗಿರಬೇಕು. ಕೊನೆಗೆ ನಮ್ಮ ಪ್ರಾಣವನ್ನು ಕೂಡ ಅರ್ಪಿಸಲು ಸಜ್ಜಗಿರಬೇಕು.

75ನೇ ಸ್ವಾತಂತ್ರ್ಯ ದಿನ ಎಂಬ ಕಾರಣದಿಂದಾಗಿ ಇದನ್ನು ತಾಯಿ ಭಾರತಾಂಬೆಯ ಸುಪುತ್ರರು ಇದನ್ನು ತುಂಬಾ ವೈಭವಯುತವಾಗಿ ಆಚರಿಸಲು ಸಜ್ಜಾಗಿದ್ದಾರೆ. ಇನ್ನಾದರೂ ನಾವು ಈ ರಾಷ್ಟ್ರೀಯ ಹಬ್ಬಗಳನ್ನು ಕೇವಲ ಮೊಬೈಲ್ಗಳಲ್ಲಿ ಸಂದೇಶವನ್ನು ಕಳುಹಿಸಲು ಸೀಮಿತವಾಗಿಡದೆ, ಮನ ಮನಗಳಲ್ಲಿ ಈ ಸ್ವಾತಂತ್ರೋತ್ಸವದ ಉದ್ದೇಶವನ್ನು ದೇಶಭಕ್ತಿಯನ್ನು ಮೂಡಿಸಿಕೊಳ್ಳುವ, ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಈ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ನಮ್ಮ ಮುಖ್ಯ ಗುರಿಯು ನಮ್ಮ ಯುವ ಪೀಳಿಗೆಗೆ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಹೆಮ್ಮೆ ಮತ್ತು ಧೈರ್ಯ ಮತ್ತು ವಸಾಹತುಷಾಹಿ ಆಡಳಿತದ ಬಗ್ಗೆ ಶಿಕ್ಷಣ ನೀಡುವುದಾಗಿದೆ. ನಮ್ಮ ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು. ಇದರ ಫಲವಾಗಿ ದೇಶಕ್ಕೆ ಸೇವೆ ಸಲ್ಲಿಸುವುದು ಮತ್ತು ಸಮಾಜದ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ.

 

ಲೇಖನ

ಬ್ರಿಜೇಶ್ ಕುಮಾರ್. ಬಿ. ಟಿ.
ದ್ವಿತೀಯ ಪಿ ಯು ವಿದ್ಯಾರ್ಥಿ.
ಚಿತ್ರದುರ್ಗ.

Leave a Reply

Your email address will not be published. Required fields are marked *