ಕರ್ನಾಟಕದಲ್ಲಿ ಕಾಂಗ್ರೆಸ್ ಅಧೋಗತಿಗೆ ಬಂದಿದೆ

ಹುಬ್ಬಳ್ಳಿ:(ಸುದ್ದಿವಾಣಿ) ಕಾರ್ಯಕರ್ತರಿಂದ ಕಾಂಗ್ರೆಸ್ ಹಣ ವಸೂಲಿ ಮಾಡುವುದನ್ನು ನೋಡಿದರೇ ಆ ಪಕ್ಷ ಅದೋಗತಿಗೆ ಬಂದಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಅರ್ಜಿ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಣ ವಸೂಲಿ ಮಾಡುತ್ತಿದೆ. ಅವರು ಕಾರ್ಯಕರ್ತರಿಂದ ಹಣ ವಸೂಲಿ ಮಾಡಿ ಸಂಘಟನೆ ಮಾಡುತ್ತಾರೆಂದರೇ ಮಾಡಲಿ, ಆದರೆ ಒಂದು ಲಕ್ಷ, ಐದು ಲಕ್ಷ ಹಣ ವಸೂಲಿ ಮಾಡೋದು ಆ ಪಕ್ಷದ ಅದೋಗತಿಯನ್ನು ತೋರಿಸುತ್ತದೆ.  ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿಯೂ […]

Continue Reading

ಡಾಲಿ ಧನಂಜಯ್ ಮತ್ತು ರಮ್ಯಾ ಜೋಡಿಯ ಉತ್ತರಕಾಂಡ ಆರಂಭ

      ಮಾಲತೇಶ್ ಅರಸ್  ಸಾರಥ್ಯದಲ್ಲಿ ಬೆಂಗಳೂರು: (ಸುದ್ದಿವಾಣಿ): ವಿಜಯ್ ಕಿರಗಂದೂರು ಅರ್ಪಿಸುತ್ತಿರುವ, ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ, ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಮುಹೂರ್ತ ಇದೇ ನವೆಂಬರ್ ೬ಕ್ಕೆ, ಮಧ್ಯಾಹ್ನ ೩.೨೨ಕ್ಕೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ‘ರತ್ನನ್ ಪ್ರಪಂಚ’ ಯಶಸ್ಸಿನ ನಂತರ ಮತ್ತೊಮ್ಮೆ ಒಂದಾಗಿದ್ದಾರೆ ರೋಹಿತ್ ಪದಕಿ ಹಾಗೂ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್.ಚಿತ್ರದ ಮುಖ್ಯ ಪಾತ್ರಧಾರಿಗಳಾದ ಧನಂಜಯ ಹಾಗು ರಮ್ಯ ಪೂಜೆಗೆ ಉಪಸ್ಥಿತರಿದ್ದರು.   ಸಿನಿರಸಿಕರಿಗೆ ಅಚ್ಚರಿ ಹಾಗೂ ಸಿಹಿ […]

Continue Reading

ಮಳವಳ್ಳಿಯಲ್ಲಿ ಎಸ್.ಟಿ ಗಾಗಿ ಕಾಡುಗೊಲ್ಲರ ಘರ್ಜನೆ

ಮಂಡ್ಯ: ಬುಡಕಟ್ಟು ಪರಂಪರೆಯ ಆದಿವಾಸಿಗಳಾಗಿರುವ ಕಾಡುಗೊಲ್ಲರು ನಿಜವಾದ ಮೂಲಸಿವಾಸಿಗಳು. ಇಂತಹ ಕಾಡುಗೊಲ್ಲರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇನೆ ಮತ್ತು ಮುಂದಿನ ಅಧಿವೇಶನದಲ್ಲಿ ಕಾಡುಗೊಲ್ಲರ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ಮಳವಳ್ಳಿ ಶಾಸಕರಾದ ಡಾ.ಕೆ.ಅನ್ನದಾನಿ ಹೇಳಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊಸಪುರ ಗೊಲ್ಲರ ದೊಡ್ಡಿಯಲ್ಲಿ ನೂತನ ತಾಲೂಕು ಘಟಕ, ಅಧ್ಯಕ್ಷರು ಹಾಗು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಡುಗೊಲ್ಲ ಜನಾಂಗವನ್ನು ಎಸ್.ಟಿ ಗೆ ಸೇರಿಸುವ […]

Continue Reading

ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

ಚಿತ್ರದುರ್ಗ ತಾಲ್ಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾದ ಕೆಂಚಪ್ಪ ಹುಲಿ, ರಮೇಶ್ ಮದರಿ, ಗಂಗಾಧರ ಇತರರು ಇದ್ದರು.  

Continue Reading

ಕೋಟೆನಾಡಿನ ಸಾಹಿತ್ಯ ತೋಟದಲ್ಲಿ ಅರಳಿದ “ಬಯಲು ಹೂವು”

  ಗೀತಾ ಭರಮಸಾಗರ ಅವರ “ಬಯಲು ಹೂವು” ಕವನ ಸಂಕಲನದ ಜನಾರ್ಪಣೆ ಚಿತ್ರದುರ್ಗ:  (ಸುದ್ದಿವಾಣಿ) ಈ ದಿನ ಮಹಿಳೆಯರು ಶಕ್ತಿಯಾಗಿ ಬೆಳೆಯುತ್ತಿದ್ದಾರೆ ಎಲ್ಲಾ ರೀತಿಯ ಕಾರ್ಯಗಳಲ್ಲಿಯೂ ಮುಂದೆ ಇದ್ದಾರೆ. ವೈಯಕ್ತಿಕ ಮತ್ತು ಒತ್ತಡದಲ್ಲಿ ಮಹಿಳೆ ಬರೆಯುತ್ತಿದ್ದು. ಇಲ್ಲಿನ ಕವಿತೆಗಳು ಎಲ್ಲವನ್ನೂ ಒಳಗೂಂಡಿದೆ ಎಂದು ಕನ್ನಡ ಸಹ ಪ್ರಾಧ್ಯಾಪಕಿ ಡಾ.ಭಾರತಿದೇವಿ ಹೇಳಿದರು. ನಗರದ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕಿ ಗೀತಾ ಭರಮಸಾಗರ ಅವರ ಬಯಲು ಹೂವು ಕವನ ಸಂಕಲನದ ಜನಾರ್ಪಣೆಯಲ್ಲಿ ಮಾತನಾಡಿ, ಹೆಣ್ಣಿನ ಶೋಷಣೆಗೆ ಒಳಪಡಿಸುವ ರೀತಿಯಲ್ಲಿ […]

Continue Reading