ಜಾನಪದ ಕಲಾವಿದ  ಮರಿ ಜುಂಜಯ್ಯಗೆ ಕಾಡುಗೊಲ್ಲರ ಅಭಿನಂದನೆ

ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜನ ಜಾಗೃತಿ ಸಮಾರಂಭದಲ್ಲಿ ಹಿರಿಯ ಜಾನಪದ ಕಲಾವಿದ  ಮರಿ ಜುಂಜಯ್ಯ ಅವರನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶಿವು ಯಾದವ್ ಸನ್ಮಾನಿಸಿದರು.  ಯುವ ಘಟಕದ ರಾಜ್ಯಾಧ್ಯಕ್ಷರ ಕೆ.ಜೆ.ಹಳ್ಳಿ ಸುರೇಶ್, ಕರ್ನಾಟಕ ಬುಡಕಟ್ಟು ಪರಿಷತ್ತು ಅಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ, ಕಾಡುಗೊಲ್ಲರ ಸಂಘದ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮ್ಯಾಕ್ಲೂರಳ್ಳಿ ತಿಮ್ಮಯ್ಯ,  ರಾಮನಗರದ ಜಿಲ್ಲಾಧ್ಯಕ್ಷರಾದ ರಮೇಶ್ ಮತ್ತು […]

Continue Reading

ಸಿದ್ದರಾಮಯ್ಯ ಅವರ ಆಪ್ತ ಪಿ. ರಾಜಕುಮಾರ್ ನಿಧನ.

ದಾವಣಗೆರೆ: ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯ ಕುರುಬರ ಸಂಘದ ನಿರ್ದೇಶಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಪಿ.ರಾಜಕುಮಾರ (58) ತಡರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಾವಣಗೆರೆ ನಗರದ ಜೆ.ಎಚ್ . ಪಟೇಲ್ ಬಡಾವಣೆ ಅವರ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ಎರಡು ಗಂಟೆಯ ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ನಂತರ ಸ್ವಗ್ರಾಮ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಪತ್ನಿ ಹಾಗೂ ಇಬ್ಬರು […]

Continue Reading

ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು

ಅರಬಗಟ್ಟದಲ್ಲಿ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು ಭಯ ಭೀತರಾದ ಗ್ರಾಮಸ್ಥರು ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಹೋಬಳಿ ಅರಬಗಟ್ಟ ಗ್ರಾಮದಲ್ಲಿ ಹೈವೋಲ್ಟೇಜ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ 3 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ  ನಡೆದಿದೆ.  ಮೂರು ಎಮ್ಮೆಗಳು ಗಂಗಪ್ಪರ ಸಿದ್ದರಾಮಪ್ಪ ಎಂಬ ರೈತರಿಗೆ ಸೇರಿದ್ದು, ಸುಮಾರು 1.60ಲಕ್ಷ ರೂ ನಷ್ಟವಾಗಿದೆ.‌ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಲೈನ್ ಹತ್ತಿ ಉರಿದು ಸಂಭವಿಸಿದ ಅವಘಡದಿಂದ ಇಡೀ ಗ್ರಾಮ ಭಯಭೀತವಾಗಿದೆ. ಪಕ್ಕದಲ್ಲಿರುವ ಶಾಲೆಯಿಂದ ಮಕ್ಕಳು […]

Continue Reading

ನಿಜಲಿಂಗಪ್ಪ ಬಳಿಕ  ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ಭಾಗ್ಯ.

ಮಲ್ಲಿಕಾರ್ಜುನ ಖರ್ಗೆ ಪರ ಕರ್ನಾಟಕದ ಮತದಾರರ ಒಲವು ಚಿತ್ರದುರ್ಗ: (ಸುದ್ದಿವಾಣಿ) ದಶಕಗಳ ಕಾಲ ಶಾಸಕರಾಗಿ, ಸಂಸದರಾಗಿ ರಾಜ್ಯ, ಕೇಂದ್ರದಲ್ಲಿ ಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರೆ ಚಿತ್ರದುರ್ಗದ ಎಸ್. ನಿಜಲಿಂಗಪ್ಪ ಅವರ ನಂತರದ ಸ್ಥಾನ ಸಿಕ್ಕಂತಾಗುತ್ತದೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಹೋರಾಟದ ಹಿನ್ನೆಲೆ ಇದ್ದು, ಅಧ್ಯಕ್ಷ ಪದವಿಗೆ ಹೆಚ್ಚು ಗೌರವ ಇದೆ. ಇಂತಹ ಉನ್ನತ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದು, ಅವರ ಗೆಲುವು ರಾಷ್ಟ್ರದ […]

Continue Reading

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಬೆಂಗಳೂರು:( ಸುದ್ದಿವಾಣಿ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಪತ್ರಕರ್ತರ ಮಕ್ಕಳಿಗೆ ಏರ್ಪಡಿಸಿರುವ ಪ್ರತಿಭಾ ಪುರಸ್ಕಾರ-2022 ಕಾರ್ಯಕ್ರಮವು ಬೆಂಗಳೂರು ಪ್ರೆಸ್‌ಕ್ಲಬ್‌ ಆವರಣದಲ್ಲಿ ಶನಿವಾರ ನಡೆಯಲಿದೆ. ಇದೇ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಶನಿವಾರ ಬೆಳಿಗ್ಗೆ10.30ಕ್ಕೆ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಉನ್ನತ […]

Continue Reading

ಬಡ ಕೂಲಿಕಾರ್ಮಿಕರಿಗೆ ನರೇಗಾ ದಾರಿದೀಪ:ಡಾ.ಎಸ್. ರಂಗಸ್ವಾಮಿ

  ಚಿತ್ರದುರ್ಗ ಜಿಲ್ಲಾಮಟ್ಟದ ನರೇಗಾ ನೌಕರರ ಕ್ರೀಡೋತ್ಸವ-2022   ಚಿತ್ರದುರ್ಗ: ನರೇಗಾ ಯೋಜನೆ ಅಡಿ ಲಕ್ಷಾಂತರ ಬಡ ಕೂಲಿ ಕಾರ್ಮಿಕರು ಈ ಯೋಜನೆ ದಾರಿದೀಪವಾಗಿದೆ. ಜಿಲ್ಲೆಯಲ್ಲಿ ನೂರಾರು ಯುವಕರು ಈ ಯೋಜನೆಯಿಂದ ಉದ್ಯೋಗವನ್ನು ಪಡೆದಿದ್ದು ಆರ್ಥಿಕ ಸಬಲರಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳು ಹಾಗೂ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆಯ ಗೌರವಾಧ್ಯಕ್ಷರಾದ ಡಾ.ಎಸ್. ರಂಗಸ್ವಾಮಿ ಹೇಳಿದರು. ಒನಕೆ ಓಬವ್ವ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ […]

Continue Reading

ಜಿತೇಂದ್ರ ಹುಲಿಕುಂಟೆ ತಾಯಿ ದ್ರಾಕ್ಷಾಯಣಮ್ಮ ನಿಧನ

ಚಿತ್ರದುರ್ಗ: ಬಿಜೆಪಿ ಯುವ ಮುಖಂಡ, ಜಯದೇವ ವಿದ್ಯಾರ್ಥಿ ನಿಲಯದ ನಿರ್ದೇಶಕರಾದ ಜಿತೇಂದ್ರ ಹುಲಿಕುಂಟೆ ಅವರ ತಾಯಿ ಶ್ರೀಮತಿ ದಾಕ್ಷಾಯನಮ್ಮ ನಿಜಲಿಂಗಪ್ಪ ( 60 ವರ್ಷ) ಇವರು ಶನಿವಾರ ಮಧ್ಯಾಹ್ನ 1:40 ನಿಧನರಾದರು. ಮಗ ಹಾಗೂ ಮಗಳನ್ನು ಅಗಲಿದ್ದು, ಇವರ ಮಗನಾದ ಜಿತೇಂದ್ರ ಹುಲಿ ಕುಂಟೆ ವೀರಶೈವ ಸಮಾಜದ ಮುಖಂಡರಾಗಿದ್ದು ಹಾಗೂ ಶ್ರೀ ಮುರುಘಾಮಠದ ಭಕ್ತರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ  ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ  ಎಂದು ಜಿತೇಂದ್ರ ತಿಳಿಸಿದ್ದಾರೆ. ಶನಿವಾರ ಪಾರ್ಥಿವ […]

Continue Reading